ಮಾನವ ಧರ್ಮಕ್ಕೆ ಜಯವಾಗಲಿ! ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. Welcome to Shree Revanasiddeshwara Temple Horti ಸರ್ವೇ ಜನಹ ಸುಖಿನೋ ಭವಂತು !

Events

Shree Revanasiddeshwara Temple Horti Events ಪ್ರತಿದಿನ:  ಬೆಳಗ್ಗೆ ರೇವಣಸಿದ್ಧೇಶ್ವರ ಹಾಗೂ ಮಲ್ಲಿಕಾರ್ಜುನ ಹಳೆ ದೇವಾಲಯಗಳಲ್ಲಿ ಅಭಿಷೇಕ ಹಾಗೂ ಅರ್ಚನೆ, ತದನಂತರ ಭಕ್ತರಿಗೆಅನ್ನಪ್ರಸಾದ ನೆರವೇರುತ್ತದೆ.  
ಸಾಯಂಕಾಲ ಪೂಜೆ ಹಾಗೂ ಮಂಗಳಾರುತಿ ನೆರವೇರುತ್ತದೆ.

ಪ್ರತಿ ಸೋಮವಾರ: ರಾತ್ರಿ ಊರಿನ ಹೊಸ ದೇವಾಲಯಗಳಲ್ಲಿ ಪೂಜೆಯೊಂದಿಗೆ ಪಲ್ಲಕ್ಕಿ ಉತ್ಸವ(ಪಟಾಕ್ಷಿ) ನೆರವೇರುತ್ತದೆ.

ಛಟ್ಟಿ ಜಾತ್ರೆ: ಪ್ರತಿ ವರ್ಷ ಛಟ್ಟಿ ಅಮವಾಸೆಯ ರೇವತಿ ನಕ್ಷತ್ರದಂದು, ಶ್ರೀ ರೇವಣಸಿದ್ಧೇಶ್ವರರು ಬೆಟ್ಟದ ಮಾಳಮ್ಮಳಿಗೆ ದರುಶನ, ಪಲ್ಲಕ್ಕಿ, ನಂದಿಕೋಲು ಉತ್ಸವ, ಸದರ ಮೆರವಣಿಗೆ, ದನಗಳ ಜಾತ್ರೆ, ಕುಸ್ತಿ ಪಂದ್ಯಗಳು, ಮದ್ದು ಹಾರಿಸುವದು ಬಹಳ ವಿಜೃಂಭಣೆಯಿಂದ ನಡಿಯುತ್ತದೆ. ನಾಟಕ ಸಂಘಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ನಾಟಕ ಪ್ರದರ್ಶನ ಹಾಗೂ ಮನರಂಜನೆ ಕಾರ್ಯಕ್ರಮಗಳು.

ಶ್ರಾವಣ ಮಾಸದ ಜಾತ್ರೆ: ಪವಿತ್ರ ಶ್ರಾವಣ ಮಾಸದಲ್ಲಿ ಮೂರನೇ ಸೋಮವಾರದಂದು ಗಜ ರಾಜನಿಂದ ಬ್ರಹತ್ ರಥೋತ್ಸವಕ್ಕೆ ಚಾಲನೆ, ಪುರಾಣ ಮೆರವಣಿಗೆ, ಕುಂಭಮೇಳ, ಪಂಚ ಲೋಹದ ಪಂಚ ಮೂರ್ತಿಗಳ ಭವ್ಯ ಮೆರವಣಿಗೆ, ಪಲ್ಲಕ್ಕಿ ಮತ್ತು ನಂದಿಕೋಲು ಮೆರವಣಿಗೆಯೊಂದಿಗೆ ಗುಡ್ಡ ಏರುವದು.