ಮಾನವ ಧರ್ಮಕ್ಕೆ ಜಯವಾಗಲಿ! ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. Welcome to Shree Revanasiddeshwara Temple Horti ಸರ್ವೇ ಜನಹ ಸುಖಿನೋ ಭವಂತು !

Shree Revanasiddeshwara Jatre

Shree Revanasiddeshwara Temple Horti
 
ಛಟ್ಟಿ ಜಾತ್ರೆ: ಪ್ರತಿ ವರ್ಷ ಛಟ್ಟಿ ಅಮವಾಸೆಯ ರೇವತಿ ನಕ್ಷತ್ರದಂದು, ಶ್ರೀ ರೇವಣಸಿದ್ಧೇಶ್ವರರು ಬೆಟ್ಟದ ಮಾಳಮ್ಮಳಿಗೆ ದರುಶನ, ಪಲ್ಲಕ್ಕಿ, ನಂದಿಕೋಲು ಉತ್ಸವ, ಸದರ ಮೆರವಣಿಗೆ, ದನಗಳ ಜಾತ್ರೆ, ಕುಸ್ತಿ ಪಂದ್ಯಗಳು, ಮದ್ದು ಹಾರಿಸುವದು ಬಹಳ ವಿಜೃಂಭಣೆಯಿಂದ ನಡಿಯುತ್ತದೆ.

ಶ್ರಾವಣ ಮಾಸದ ಜಾತ್ರೆ: ಪವಿತ್ರ ಶ್ರಾವಣ ಮಾಸದಲ್ಲಿ ಮೂರನೇ ಸೋಮವಾರದಂದು ಗಜ ರಾಜನಿಂದ ಬ್ರಹತ್ ರಥೋತ್ಸವಕ್ಕೆ ಚಾಲನೆ, ಪುರಾಣ ಮೆರವಣಿಗೆ, ಕುಂಭಮೇಳ, ಪಂಚ ಲೋಹದ ಪಂಚ ಮೂರ್ತಿಗಳ ಭವ್ಯ ಮೆರವಣಿಗೆ, ಪಲ್ಲಕ್ಕಿ ಮತ್ತು ನಂದಿಕೋಲು ಮೆರವಣಿಗೆಯೊಂದಿಗೆ ಗುಡ್ಡ ಏರುವದು.

   ಛಟ್ಟಿ ಜಾತ್ರೆ:2016


Shree Revanasiddeshwara Temple History

Shree Revanasiddeshwara Temple Horti History
ಶ್ರೀಕ್ಷೇತ್ರ ಹೊರ್ತಿ ಸುಪ್ರಸಿದ್ದ ಪುಣ್ಯ ಕ್ಷೇತ್ರವಾಗಿದ್ದು, ಕರ್ನಾಟಕ ರಾಜ್ಜದ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ 13 ನೇಯ ರಾಷ್ಟ್ರೀಯ ಹೆದ್ದಾರಿಯ ಮೇಲಿದೆ. ಈ ಕ್ಷೇತ್ರದಲ್ಲಿ ಪ್ರಾಚೀನ ಶಿವ ದೇವಾಲಯ ಇತ್ತು, ಶಿವನು ವಾಸಿಸುವ ಸ್ಥಳವೆಂದು ನಂಬಲಾಗಿದೆ. ಇಲ್ಲಿ ಅನೇಕ ಋಷಿ ಮುನಿಗಳು, ತಪಶ್ವಿಗಳು, ಸಾದು ಸಂತರು ವಾಸವಾಗಿದ್ದ ಉಲ್ಲೇಖವಿದೆ. ಸಿದ್ದರು ವಾಸವಾಗಿದ್ದ ಈ ಕ್ಷೇತ್ರಕ್ಕೆ ಸಿದ್ದಾಪುರವೆಂಬ ಹೆಸರಿತ್ತು. ತದನಂತರ ಹೊರ್ತಿಕ್ಷೇತ್ರದಿಂದ ಕರೆಯಲ್ಪಡುತ್ತಿದೆ.

ಪರಶಿವನ ಅಪ್ಪಣೆಯಂತೆ ಶ್ರೀ ರೇಣುಕಾಚಾರ್ಯರು ವಿಶ್ವಶಾಂತಿಗಾಗಿ, ವಿಶ್ವಧರ್ಮ ವೀರಶೈವ ಧರ್ಮದ ಸ್ಠಾಪನೆಗಾಗಿ ಭಕ್ತರ ಪರಿಪಾಲನೆಗಾಗಿ ಭೂಲೋಕದಲ್ಲಿ ಸುಕ್ಷೇತ್ರ ಕೊಲನುಪಾಕ(ತೆಲಂಗಣ) Kolanupaka in Nalgonda District, Telangana ಸೋಮನಾಥ ಲಿಂಗದಲ್ಲಿ ಸೂರ್ಯಪ್ರಕಾಶಮಾನವಾಗಿ ಅವತರಿಸಿದರು. ಶ್ರೀ ರೇವಣಸಿದ್ಧರು ಲೋಕಸಂಚರಿಸುತ್ತಾ ಸಿದ್ದಾಪುರಕ್ಕೆ(ಹೊರ್ತಿಗೆ) ಆಗಮಿಸಿ ಹಲವಾರು ಪವಾಡಗಳನ್ನು ಮಾಡಿರುವ ಉಲ್ಲೇಖವಿದೆ.

>>"ಸುಕ್ಷೇತ್ರ ಹೊರ್ತಿಯಲ್ಲಿ ಶ್ರೀ ರೇವಣಸಿದ್ಧರ ಪವಾಡಗಳು" - ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ